ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಬಲಿ: ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ, ಪ್ರತಿಭಟನೆ - Protest against the hospital
🎬 Watch Now: Feature Video
ಕೋಲಾರ : ಆಕೆ ಕಳೆದ ಎಂಟು ತಿಂಗಳಿಂದ ಬೆಟ್ಟದಷ್ಟು ಕನಸುಗಳನ್ನು ಕಟ್ಟಿಕೊಂಡು ತವರು ಮನೆಗೆ ಬಂದಿದ್ದ ಗರ್ಭಿಣಿ, ಸಣ್ಣದಾಗಿ ಆರೋಗ್ಯದಲ್ಲಿ ಏರುಪೇರಾದ ಕಾರಣ ಖಾಸಗಿ ಆಸ್ಪತ್ರೆ ಸೇರಿದ್ದ ಆಕೆಯನ್ನ ಪರೀಕ್ಷೆ ಮಾಡಿದ ವೈದ್ಯರು, ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ರು. ಆದ್ರೆ ನರ್ಸ್ ಕೊಟ್ಟ ಇಂಜೆಕ್ಷನ್‌ನಿಂದ ಅದೆಷ್ಟೊ ಕನಸುಗಳನ್ನ ಕಟ್ಟಿಕೊಂಡಿದ್ದ ಗರ್ಭಿಣಿ ಹಾಗೂ ಇನ್ನು ಪ್ರಪಂಚವನ್ನೇ ನೋಡದ ಕೂಸು ಜೀವ ಕಳೆದುಕೊಂಡಿದೆ. ವಿಷಯ ತಿಳಿದು ಆಸ್ಪತ್ರೆಗೆ ಜಮಾಯಿಸಿದ ಸಂಬಂಧಿಕರು ಆಸ್ಪತ್ರೆಯ ಕಿಟಕಿ ಗಾಜುಗಳನ್ನ ಒಡೆದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.