501 ಸಸಿ ನೆಡುವ ಕಾರ್ಯಕ್ರಮಕ್ಕೆ ರಂಭಾಪುರಿ ಜಗದ್ಗುರುಗಳಿಂದ ಚಾಲನೆ - ವಿಜಯಪುರ ಚಡಚಣ ಕೆರೂರು ಸಸಿ ನೆಡುವ ಕಾರ್ಯಕ್ರಮ ಸುದ್ದಿ
🎬 Watch Now: Feature Video
ವಿಜಯಪುರ: ಚಡಚಣ ತಾಲೂಕಿನ ಕೆರೂರದ ಭೈರವನಾಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಕೇದಾರ ಹಾಗೂ ರಂಭಾಪುರಿ ಜಗದ್ಗುರುಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಂಭಾಪುರಿ ಜಗದ್ಗುರುಗಳು, ಗ್ರಾಮೀಣ ಭಾಗದಲ್ಲಿ ಇಂಥಹ ಒಂದು ಸಂಸ್ಥೆಯನ್ನು ಹುಟ್ಟುಹಾಕಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ. ಶಿಕ್ಷಣದ ಜೊತೆಗೆ ಪರಿಸರದ ಬಗ್ಗೆ ಕಾಳಜಿ ತೋರಿಸಿ, ಪರಿಸರದ ಮಡಿಲಿನಲ್ಲಿ ಶಿಕ್ಷಣ ಕೊಡುವುದು ಒಳ್ಳೆಯದು ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾದೇವ ಸಾಹುಕಾರ ಭೈರಗೊಂಡ, ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Last Updated : Dec 10, 2019, 8:44 PM IST