ಬಜೆಟ್ನಲ್ಲಿ ಉದ್ಯಮಿಗಳಿಗೆ ಗೌರವ ನೀಡಲಾಗಿದೆ: ಕೆಸಿಸಿಐ ಅಧ್ಯಕ್ಷ ಐಸಕ್ ವಾಸ್ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
🎬 Watch Now: Feature Video
ಮಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ನಲ್ಲಿ ಉದ್ಯಮಿಗಳಿಗೆ ಹಾಗೂ ಜನರಿಗೆ ಗೌರವ ನೀಡಲಾಗಿದ್ದು, ಇದಕ್ಕಾಗಿ ಹಣಕಾಸು ಸಚಿವರಿಗೆ ಅಭಿನಂದಿಸುತ್ತೇನೆ ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ (ಕೆಸಿಸಿಐ) ಅಧ್ಯಕ್ಷ ಐಸಕ್ ವಾಸ್ ತಿಳಿಸಿದ್ದಾರೆ. ಕೇಂದ್ರ ಬಜೆಟ್ನಲ್ಲಿ ರೈತರು, ಕಾರ್ಪೋರೇಟ್ ವಿಭಾಗ, ಸಣ್ಣ ಕೈಗಾರಿಕೆ ಮತ್ತು ಜನರಿಗೆ ಸಾಕಷ್ಟು ಪ್ರಯೋಜನಗಳಿವೆ ಎಂದಿದ್ದಾರೆ. ಉದ್ಯೋಗ ಸೃಷ್ಟಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡಲಾಗಿದೆ. ಮೀನುಗಾರಿಕೆ ಅಭಿವೃದ್ಧಿ ಯೋಜನೆ, ಹಾಲುತ್ಪಾದನೆ ದ್ವಿಗುಣಗೊಳಿಸುವುದು, ಸೋಲಾರ್ ವಿದ್ಯುತ್ ಉತ್ಪಾದನೆ ಉತ್ತೇಜನ ಕೊಡುವ ಅಂಶ ಬಜೆಟ್ನಲ್ಲಿದೆ ಎಂದು ಶ್ಲಾಘಿಸಿದರು.