ಗಂಗಾವತಿಯಲ್ಲಿ ಕಾರ್ತೀಕ ಮಾಸದ ಲಕ್ಷ ದೀಪೋತ್ಸವ - ದೇಗುಲದ ಪ್ರಾಂಗಣದಲ್ಲಿ ದೀಪಗಳು
🎬 Watch Now: Feature Video
ಗಂಗಾವತಿ: ಇಲ್ಲಿನ ಜಯನಗರದಲ್ಲಿರುವ ಸತ್ಯದೇವೇಶ ಭಜನಾ ಮಂಡಳಿಯ ಮಹಿಳೆಯರು ಕಾರ್ತೀಕ ಮಾಸದ ಅಂಗವಾಗಿ ಸತ್ಯನಾರಾಯಣ ದೇಗುಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ಲಕ್ಷ ದೀಪೋತ್ಸವ ಹಮ್ಮಿಕೊಂಡದ್ದರು. ದೇಗುಲದ ಪ್ರವೇಶ ದ್ವಾರ, ಆವರಣ, ಹೊರಂಗಣ, ಒಳಾಂಗಣ ಸೇರಿದಂತೆ ದೇಗುಲದ ಪ್ರಾಂಗಣದಲ್ಲಿ ದೀಪಗಳನ್ನಿಟ್ಟು ಅಲಂಕರಿಸಿ ದೀಪೋತ್ಸವ ನೆರವೇರಿಸಿದರು.