ಕರ್ನಾಟಕ ಬಂದ್.. ಮೆಜೆಸ್ಟಿಕ್ನಲ್ಲಿ ಪ್ರತಿಕ್ರಿಯೆ ನೀರಸ.. ಎಂದಿನಂತೆ ರಸ್ತೆಗಿಳಿದ ಬಸ್-ಆಟೋ - ಬೆಂಗಳೂರು ಮೆಜೆಸ್ಟಿಕ್
🎬 Watch Now: Feature Video
ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ಕಂಡು ಬಂದಿದೆ. ಮೆಜೆಸ್ಟಿಕ್ನಲ್ಲಿ ಬಿಎಂಟಿಸಿ- ಕೆಎಸ್ಆರ್ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ಆರಂಭಿಸಿವೆ. ಆಟೋ ಚಾಲಕರು ರಸ್ತೆಗಿಳಿದಿದ್ದು, ಪ್ರಯಾಣಿಕರ ಸೇವೆಗೆ ಸಿದ್ಧಗೊಂಡಿವೆ. ಹಾಗೇ ನಮ್ಮ ಮೆಟ್ರೋ ಸೇವೆಯು ಆರಂಭಗೊಂಡಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರ ನಿಯೋಜನೆ ಮಾಡಲಾಗಿದೆ. ಬಂದ್ ಕುರಿತ ನಮ್ಮ ಪ್ರತಿನಿಧಿಯ ಪ್ರತ್ಯಕ್ಷ ವರದಿ ಇಲ್ಲಿದೆ.