ಮೈಸೂರಲ್ಲಿ ಬುಡಕಟ್ಟು ಉತ್ಸವ: ಸಖತ್ ಸ್ಟೆಪ್ ಹಾಕಿದ ಆದಿವಾಸಿಗಳು - ಮೈಸೂರಲ್ಲಿ ಬುಡಕಟ್ಟು ಉತ್ಸವ
🎬 Watch Now: Feature Video
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರದಲ್ಲಿ ಬುಡಕಟ್ಟು ಉತ್ಸವವನ್ನು ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ನಾಗರಹೊಳೆಯ ಸಮಗ್ರ ಗಿರಿಜನಾಭಿವೃದ್ಧಿ ಕಲಾಸಂಸ್ಥೆಯ ಕಲಾವಿದರು ನಡೆಸಿಕೊಟ್ಟ ಸೋದೆ ದಿಮ್ಮಿ ನೃತ್ಯ ನೋಡುಗರಿಗೆ ಆದಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸಿತು. ನಂತರ ಸ್ನೇಹ ಮತ್ತು ತಂಡದವರು ನಡೆಸಿಕೊಟ್ಟ ನೃತ್ಯರೂಪಕ ಎಲ್ಲರನ್ನು ಮನರಂಜಿಸಿತು. ಬಿಳಿಗಿರಿರಂಗನ ಬೆಟ್ಟದ ಬಸವರಾಜು ಮತ್ತು ತಂಡ ನಡೆಸಿಕೊಟ್ಟ ಗೊರುಕನ ನೃತ್ಯ ಸೋಲಿಗರ ಸಂಸ್ಕೃತಿಯನ್ನು ಪಸರಿಸುವಂತೆ ಮಾಡಿತು. ಉತ್ಸವದಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಬುಡಕಟ್ಟು ಜನರು ಪಾಲ್ಗೊಂಡಿದ್ದರು.