'ಮೋದಿ ನಿ ಸೇಲಾದೆ, ಅದಾನಿ-ಅಂಬಾನಿ ಪಾಲಾದೆ'.. - ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹ
🎬 Watch Now: Feature Video
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಹಾಗೂ ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟಕ್ಕೆ ಬೆಂಬಲಿಸಿ ಕಲಬುರಗಿಯಲ್ಲಿ ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಲಾಗುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆ ನೇತೃತ್ವದಲ್ಲಿ ರೈತರು, ಸುಮಾರು 300ಕ್ಕೂ ಅಧಿಕ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗಿಯಾಗಿವೆ. ನಗರದ ಹೊರವಲಯ ಹುಮನಾಬಾದ್ ರಿಂಗ್ ರಸ್ತೆಯಿಂದ ಆರಂಭವಾದ ಪರೇಡ್, ಗಂಜ್, ಮಾರ್ಕೆಟ್, ಜಗತ್ ವೃತ್ತ, ಎಸ್‌ವಿಪಿ ವೃತ್ತದ ಮಾರ್ಗವಾಗಿ ಡಿಸಿ ಕಚೇರಿ ತಲುಪಲಿದ್ದಾರೆ. ಪರೇಡ್ನಲ್ಲಿ ಪ್ರಧಾನಿ ಮೋದಿ ಮೇಲೆ ಹಾಡು ಕಟ್ಟಿ ಹಾಡಲಾಗುತ್ತಿದೆ. ಮೋದಿ ನಿ ಸೇಲ್ ಆದೆ, ಅದಾನಿ-ಅಂಬಾನಿ ಪಾಲಾದೆ ಎಂದು ಕೇಂದ್ರದ ವಿರುದ್ದ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Last Updated : Jan 26, 2021, 8:23 PM IST