ಮೈತ್ರಿ ಒಪ್ಪಂದ ಮಾಡದಿದ್ರೆ ಸುಭವಾಗಿ ಗೆಲ್ಲಬಹುದಿತ್ತು: ಸಚಿವ ಜಮೀರ್ - Kannada news
🎬 Watch Now: Feature Video
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಸಚಿವ ಜಮೀರ್ ಅಹಮದ್ ಪ್ರತಿಕ್ರಿಸಿದ್ದು, ಈ ರೀತಿಯ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಈ ಚುನಾವಣೆಯಲ್ಲಿ ಮೈತ್ರಿ ಮಾಡದಿದ್ರೆ ಮಂಡ್ಯದಲ್ಲಿ ಸುಲಭವಾಗಿ ಗೆಲ್ಲಬಹುದಿತ್ತು. ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮುಂದುವರೆಸಿದೆ. ಮೈತ್ರಿ ಒಪ್ಪಂದ ಈ ವೇಳೆ ಸರಿಯಾಗಲಿಲ್ಲ. ಜನರು ಮತ ಹಾಕದೇ ತೀರ್ಪು ನೀಡಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದರು.