ಹೌದೌದು, ನಮ್ಮ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ.. ಸಚಿವ ಕೆ ಎಸ್ ಈಶ್ವರಪ್ಪ - Dissident in the state BJP
🎬 Watch Now: Feature Video
ನೇರವಾಗಿ ಹೇಳುತ್ತೇನೆ ಕೇಳಿ, ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ಸತ್ಯ. ಇದೇ ಕಾರಣಕ್ಕಾಗಿ ಕೆಲವರು ಸಭೆ ಸಹ ಸೇರಿದ್ದಾರೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಹೊನ್ನಕಿರಣಗಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಯಾರೂ ಸನ್ಯಾಸಿಗಳಲ್ಲ, ಪ್ರತಿಯೊಬ್ಬರು ಸ್ಥಾನಮಾನ ಕೇಳೋದು ಸಹಜ. ನಮ್ಮ ನಾಯಕರು ಕೂತು ಮಾತನಾಡಿ ಅಸಮಾಧಾನ ಬಗೆಹರಿಸುತ್ತಾರೆ. ನಮ್ಮ ಸರ್ಕಾರ ಮೂರೂ ವರ್ಷ ಅವಧಿ ಪೂರ್ಣಗೊಳಿಸುವುದು ಪಕ್ಕಾ ಎಂದರು.