ಕಾರ್ಮಿಕರ ಸಹಾಯಕ್ಕೆ ನಿಲ್ಲಿ: ಪಕ್ಷದ ಕಾರ್ಯಕರ್ತರಿಗೆ ಈಶ್ವರ್ ಖಂಡ್ರೆ ಸೂಚನೆ - stand up for workers' help
🎬 Watch Now: Feature Video
ಬೆಂಗಳೂರು: ಕಾರ್ಮಿಕರ ಸಹಾಯಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಕಾರ್ಮಿಕರು ದೇಶದ ಆರ್ಥಿಕತೆಯ ಬೆನ್ನೆಲುಬು. ಅವರ ಕಷ್ಟದ ದುಡಿಮೆಯಿಂದಲೇ ಇವತ್ತು ಇಷ್ಟೊಂದು ಪ್ರಗತಿ ಸಾಧ್ಯವಾಗಿದೆ. ಲಾಕ್ ಡೌನ್ ಹಿನ್ನೆಲೆ ಕೋಟ್ಯಂತರ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಮ್ಮೆಲ್ಲರಿಗೂ ಒಂದು ಸೂಚನೆ ನೀಡಿದ್ದು ಕಾರ್ಮಿಕರ ಸಹಾಯಕ್ಕೆ ಧಾವಿಸುವಂತೆ ತಿಳಿಸಿದ್ದಾರೆ. ಅವರ ಮಾರ್ಗದರ್ಶನದಂತೆ ನಾವು ನಡೆದು ಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.