ಕಣ್ಣಿಗೆ ಕಾಣದ ವೈರಸ್ ವಿರುದ್ಧದ ಹೋರಾಟ ಸಾಹಸವಾಗಿತ್ತು; ಡಾ. ಸುಜಾತ ರಾಥೋಡ್ - ಮಿಂಟೋ ಆಸ್ಪತ್ರೆ ನಿರ್ದೆಶಕಿ ಡಾ. ಸುಜಾತ ರಾಥೋಡ್
🎬 Watch Now: Feature Video
ಬೆಂಗಳೂರು : ಮಹಿಳಾ ದಿನಾಚರಣೆಯ ಪ್ರಯುಕ್ತ ಈಟಿವಿ ಭಾರತದ ಜೊತೆ ಮಾತನಾಡಿರುವ ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಬಿ.ಎಲ್. ಸುಜಾತ ರಾಥೋಡ್, ಒಬ್ಬ ಮಹಿಳೆಯಾಗಿ ಕೋವಿಡ್ ಸಂದರ್ಭದಲ್ಲಿ ಪ್ರತಿಷ್ಠಿತ ಆಸ್ಪತ್ರೆಯೊಂದರ ಉನ್ನತ ಹುದ್ದೆಯನ್ನು ನಿರ್ವಹಿಸಿದ್ದರ ಸವಾಲುಗಳ ಬಗ್ಗೆ ವಿವರಿಸಿದ್ದು, ಕಣ್ಣಿಗೆ ಕಾಣುವುದರ ವಿರುದ್ಧ ಹೇಗಾದರೂ ಹೋರಾಡಬಹುದು. ಆದರೆ, ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಡಿದ್ದು ದೊಡ್ಡ ಸಾಹಸವೇ ಆಗಿತ್ತು ಎಂದಿದ್ದಾರೆ.