ಬಡವ, ರೈತ, ಕಾರ್ಮಿಕ ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಭಾರತ ರಕ್ಷಿಸಿ ಆಂದೋಲನ - Poor, Farmer, Labor and Student Prosperity
🎬 Watch Now: Feature Video
ಆನೇಕಲ್: ಅಸಂಘಟಿತ ಕೂಲಿ ಕಾರ್ಮಿಕರ ಹಿತವನ್ನು ಕಾಪಾಡಬೇಕಾದ ರಾಜ್ಯ-ಕೇಂದ್ರ ಸರ್ಕಾರಗಳು ಕಾರ್ಮಿಕರ ವಿರೋಧಿ ನೀತಿಗಳತ್ತ ಮುಖಮಾಡಿವೆ ಎಂದು ಆರೋಪಿಸಿ ಜೆಸಿಟಿಯು ಜಂಟಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಆನೇಕಲ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡ ಜನವಾದಿ ಮಹಿಳಾ ಸಂಘಟನೆ, ಸಿಐಟಿಯು, ಸಿಪಿಎಂ ಮತ್ತು ದಲಿತ ಹಕ್ಕುಗಳ ಸಮಿತಿ ಇನ್ನಿತರೆ ಸಂಘಟನೆಗಳು ಕೆಂಬಾವುಟದೊಂದಿಗೆ ಸರ್ಕಾರದ ಬಡ ವಿರೋಧಿ ನೀತಿಗಳ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದವು.