ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಪ್ರಮಾಣ: ಆತಂಕದಲ್ಲಿ ಕೊಪ್ಪಳ ಜನತೆ - ಕೊಪ್ಪಳ ಕೋವಿಡ್ ವರದಿ
🎬 Watch Now: Feature Video
ಕೊಪ್ಪಳದಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಜು. 8 ಸಂಜೆಯ ವೇಳೆಗೆ ಮತ್ತೆ 8 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 157ಕ್ಕೆ ಏರಿದೆ. ನಿನ್ನೆ ಕೊಪ್ಪಳ ತಾಲೂಕಿನಲ್ಲಿ 7 ಜನರಿಗೆ ಗಂಗಾವತಿ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ 87 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಬ್ಬರು ಸಾವನಪ್ಪಿದ್ದಾರೆ. 67 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಮಳೆಗಾಲದಲ್ಲಿ ಶೀತ, ನೆಗಡಿ ಸಾಮಾನ್ಯ. ಕೊರೊನಾ ಲಕ್ಷಣಗಳು ಸಹ ಶೀತ, ನೆಗಡಿ ಆಗಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದೆ.