ರಾಜ್ಯದಲ್ಲಿ ಹುಲಿ ಸೇರಿದಂತೆ ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗಿದೆ : ಅಜಯ್ ಮಿಶ್ರಾ - Increase in the number of wildlife statewide
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9965260-1077-9965260-1608622220787.jpg)
ರಾಜ್ಯಾದ್ಯಂತ ಆನೆ, ಹುಲಿ ಸೇರಿದಂತೆ ವನ್ಯಜೀವಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗುತ್ತಿದೆ. ಆದರೆ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಹಿಂದೆಲ್ಲ ಪ್ರಾಣಿಗಳು ಕಾಡಿನೊಳಗೆ ಇರುತ್ತಿದ್ದವು. ಆದರೆ ಕಾಡಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಅವು ಕಣ್ಣಿಗೆ ಗೋಚರಿಸುತ್ತಿವೆ. ಇವುಗಳ ವಾಸಸ್ಥಳದಲ್ಲಿ ಒಂದಿಷ್ಟು ಬದಲಾವಣೆಗಳು ಆಗಿರುವ ಹಿನ್ನೆಲೆ ಕೆಲವೆಡೆ ವ್ಯಕ್ತಿಗಳನ್ನು ಗುರುತಿಸುತ್ತೇವೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಆನೆಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಹಿಂದಿನಷ್ಟೇ ಇವೆ. ಅರಣ್ಯ ಇಲಾಖೆ ಮೂಲಕ ವನ್ಯಜೀವಿ ಸಂರಕ್ಷಣೆಗೆ ಸಾಕಷ್ಟು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಕಾಡಿನಲ್ಲಿ ವಾಸವಾಗಿರುವ ಜನರಿಗೆ ಜಾಗೃತಿ ಮೂಡಿಸುವ ಹಾಗೂ ಅವರಿಗೆ ಪರ್ಯಾಯ ಬದುಕು ಕಲ್ಪಿಸುವ ಕಾರ್ಯ ಮಾಡುವಲ್ಲಿ ಸಾಕಷ್ಟು ಸಬಲತೆ ಸಾಧಿಸಿದ್ದೇವೆ ಎಂದು ಅರಣ್ಯ ಇಲಾಖೆ ಮುಖ್ಯ ಅರಣ್ಯ ವನ್ಯಜೀವಿ ಪರಿಪಾಲಕ ಅಜಯ್ ಮಿಶ್ರಾ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.