ಉಡುಪಿ ಶ್ರೀಕೃಷ್ಣ ಮಠದಲ್ಲಿ ಮೈದಾ, ಸಕ್ಕರೆಗೆ ಮುಕ್ತಿ..
🎬 Watch Now: Feature Video
ಉಡುಪಿ:ಬಾಬಾ ರಾಮ್ದೇವ್ ಅವರು ಕೃಷ್ಣ ಮಠದಲ್ಲಿ ಐದು ದಿನಗಳ ಕಾಲ ಯೋಗ ಶಿಬಿರ ನಡೆಸಿದ್ದರು. ಯೋಗಗುರು ಬಂದು ಹೋದ ನಂತರ ಮಠದ ಅಡುಗೆ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಮಠದ ಪ್ರಸಾದ ಮತ್ತು ದೈನಂದಿನ ಅಡುಗೆಗಳಲ್ಲಿ ಅತಿಯಾಗಿ ಬಳಸುವ ಸಕ್ಕರೆ ಮತ್ತು ಮೈದಾಗೆ ಗೇಟ್ ಪಾಸ್ ನೀಡಲಾಗಿದೆ. ವೈಟ್ ಪಾಯ್ಸನ್ ಎಂದೇ ಕರೆಯಲಾಗುವ ಈ ಎರಡು ಪದಾರ್ಥಗಳು ಮಾನವ ದೇಹಕ್ಕೆ ಉಂಟು ಮಾಡುವ ಹಾನಿಯ ಬಗ್ಗೆ ಬಾಬಾ ರಾಮ್ ದೇವ್ ಬೆಳಕು ಚೆಲ್ಲಿದ್ದರು. ಯೋಗಶಿಬಿರದ ವೇಳೆ ಮೈದಾ ಮತ್ತು ಸಕ್ಕರೆ ಬಳಸಿ ಮಾಡುವ ಖಾದ್ಯಗಳನ್ನು ವರ್ಜಿಸುವಂತೆ ಕರೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಲಿಮಾರುಸ್ವಾಮಿಗಳು ಈ ಎರಡೂ ಪದಾರ್ಥಕ್ಕೆ ನಿಷೇಧ ಹೇರಿದ್ದಾರೆ.
Last Updated : Dec 1, 2019, 10:36 AM IST