ಅವಕಾಶ ಸಿಕ್ಕರೆ ರಾಣೆಬೆನ್ನೂರು ನಗರಸಭೆ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ: ಕೆ.ಬಿ.ಕೋಳಿವಾಡ - ranebennuru haveri latest news
🎬 Watch Now: Feature Video
ರಾಣೆಬೆನ್ನೂರು: ಅವಕಾಶ ಸಿಕ್ಕರೆ ರಾಣೆಬೆನ್ನೂರು ನಗರಸಭೆ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ. ರಾಣೆಬೆನ್ನೂರಿನ ಸ್ವಗೃಹದಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ ಚುನಾವಣೆ ಬಹಳ ಕಠಿಣವಾಗಿದೆ. ಬಿಜೆಪಿಯವರು 15 ಸ್ಥಾನಗಳನ್ನು ಪಡೆದಿದ್ದಾರೆ. ಕೆಪಿಜೆಪಿ ಪಕ್ಷದ ಆರ್.ಶಂಕರ್ 10 ಸ್ಥಾನ ಪಡೆದಿದ್ದು, ಕಾಂಗ್ರೆಸ್ ಪಕ್ಷ 9 ಸದಸ್ಯರು ಇರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ನಿರೀಕ್ಷೆ ಮಾಡುವುದು ಸೂಕ್ತವಲ್ಲ ಎಂದರು. ಸದ್ಯ ರಾಜಕೀಯದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಅನುಕೂಲ ಪರಿಸ್ಥಿತಿ ಬಂದರೆ ಸದುಪಯೋಗ ಪಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದರು.