ದರ್ಶನ್ ಅಂತಹವರ ಜೊತೆ ಎಂದೂ ಕೆಲಸ ಮಾಡಿರಲಿಲ್ಲ: ಕೇರಳ ಬೆಡಗಿ ನವ್ಯ ನಾಯರ್ - ಚಾಲೆಂಜಿಗ್ ಸ್ಟಾರ್ ದರ್ಶನ್
🎬 Watch Now: Feature Video
ಬೆಂಗಳೂರು: ಗಜ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಹೆಸರುವಾಸಿಯಾಗಿದ್ದ ಕೇರಳ ಬೆಡಗಿ ನವ್ಯ ನಾಯರ್ ಇದೀಗ ಬೆಂಗಳೂರಿಗೆ ಆಗಮಿಸಿದ್ದು, ಧನ್ಯವೀಣಾ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ಈಟಿವಿ ಭಾರತ್ನೊಂದಿಗೆ ಮಾತನಾಡಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರನ್ನ ಹಾಡಿ ಹೊಗಳಿದ್ದಾರೆ. ದರ್ಶನ್ ತರಹದ ವ್ಯಕ್ತಿ ಹಾಗೂ ಆ ಮಟ್ಟಿಗೆ ಹೈಟ್ ಇರುವಂತಹ ನಟನೊಂದಿಗೆ ನಾನೆಂದಿಗೂ ನಟಿಸಿರಲಿಲ್ಲ. ಗಜ ಒಂದು ಅತ್ಯದ್ಭುತ ಚಿತ್ರ. ಆ ಸಿನಿಮಾ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.