ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟವಲ್ ಹಾಕಿದ ಕೆ ಹೆಚ್ ಮುನಿಯಪ್ಪ.. - aspirant of KPCC president post
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4458737-thumbnail-3x2-megha.jpg)
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡ ಆಕಾಂಕ್ಷಿ ಎನ್ನುವ ಮೂಲಕ ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ದಾಳವೊಂದನ್ನ ಉರುಳಿಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಿಂದಲೂ ಕೂಡ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದೇನೆ. 7 ಬಾರಿ ಸಂಸದನಾಗಿ, 2 ಬಾರಿ ಸಚಿವನಾಗಿ ಪಕ್ಷದ ಬೆಳವಣಿಗೆ ಮತ್ತು ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಕಳೆದ 40 ವರ್ಷಗಳ ರಾಜಕೀಯ ಅನುಭವದ ಮೇಲೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೈಕಮಾಂಡ್‌ಗೆ ಕೇಳಿದ್ದೇನೆ. ಅವಕಾಶ ಮಾಡಿಕೊಟ್ಟರೆ ಕೆಲಸ ಮಾಡುತ್ತೇನೆ. ಹಾಗಂತಾ, ನನ್ನನ್ನೇ ಪರಿಗಣಿಸಿ ದಿನೇಶ್ ಗುಂಡೂರಾವ್ ಅವರನ್ನು ತೆಗೆಯಿರಿ ಎಂದು ನಾನು ಕೇಳೋದಿಲ್ಲ ಎಂದರು.