ಹರಿಯುವ ನೀರಿನ ಜೊತೆ ಆಟ ಬೇಡ: ದುಸ್ಸಾಹಸಕ್ಕೆ ಕೈ ಹಾಕಿ ಜಸ್ಟ್ ಮಿಸ್ ಆದ ಯುವಕ-VIDEO - ಹುಬ್ಬಳ್ಳಿ ಶಿರೂರು ಯುವಕನ ಸುದ್ದಿ
🎬 Watch Now: Feature Video
ಹುಬ್ಬಳ್ಳಿ : ಹರಿಯುವ ಹಳ್ಳದಲ್ಲಿ ಹುಚ್ಚು ಸಾಹಸಕ್ಕೆ ಇಳಿದ ಯುವಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಬಳಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶಿರೂರು ಹಳ್ಳ ತುಂಬಿ ಹರಿಯುತ್ತಿದ್ದು, ಯುವಕನೊಬ್ಬ ಹುಚ್ಚು ಧೈರ್ಯ ಮಾಡಿ, ಬೈಕನೊಂದಿಗೆ ಹಳ್ಳದಾಟಲು ಪ್ರಯತ್ನ ಮಾಡಿದ್ದಾನೆ. ಆದರೆ, ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಈಗ ಸದ್ಯ ವೈರಲ್ ಆಗಿದೆ.
Last Updated : Oct 22, 2019, 6:15 PM IST