ಕೃಷಿಗೆ ಪರಾಗಸ್ಪರ್ಶ ಕೀಟಗಳು ಎಷ್ಟು ಉಪಕಾರಿ : ಜಿಕೆವಿಕೆ ಬೀ ಪಾರ್ಕ್ನಲ್ಲಿ ಸಿಗಲಿದೆ ಮಾಹಿತಿ - ಬೆಂಗಳೂರು ಕೃಷಿ ಮೇಳ-2020
🎬 Watch Now: Feature Video
ಬೆಂಗಳೂರು : ಬೆಳೆಗಳ ಪರಾಗಸ್ಪರ್ಶ ಕ್ರಿಯೆಗೆ ಜೇನು ಹಾಗೂ ಇತರ ಕೀಟಗಳು ಎಷ್ಟು ಮುಖ್ಯ, ಇವುಗಳ ಸಂರಕ್ಷಣೆ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಕೃಷಿಮೇಳ -2020ರ ಬೀ ಪಾರ್ಕ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಪರಾಗಸ್ಪರ್ಶ ಮಾತ್ರವಲ್ಲದೆ, ಜೇನುನೊಣಗಳಿಂದ ಜೇನುತುಪ್ಪ ಮತ್ತು ಆರು ಉಪ ಉತ್ಪನ್ನಗಳನ್ನು ಹೇಗೆ ತೆಗೆಯಬಹುದು, ವರ್ಷವಿಡಿ ಹೂವು ಬಿಡುವಂತಹ ಗಿಡಗಳನ್ನು ಬೆಳೆಯುವುದರಿಂದ ಜೇನನ್ನು ಹೇಗೆ ಸಂರಕ್ಷಿಸಬಹುದು ಎಂಬುವದು ಸೇರಿದಂತೆ ಇತರ ಉಪಯುಕ್ತ ಮಾಹಿತಿಗಳನ್ನು ಜಿಕೆವಿಕೆ ವಿಜ್ಞಾನಿ ಡಾ.ವಿಜಯ್ ಕುಮಾರ್ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.