ಕೊರೊನಾ ಸೋಂಕಿತನ ರೂಟ್ ಮ್ಯಾಪ್ ಪತ್ತೆಗಾಗಿ ಹೋಟೆಲ್ ಸಿಸಿಟಿವಿ ಪರಿಶೀಲನೆ! - ಕೆಫೆ ಮೈಸೂರು ಹೋಟೆಲ್
🎬 Watch Now: Feature Video
ಮೈಸೂರು: ಇಟ್ಟಿಗೆ ಗೂಡಿಗೆ ಬಂದವನಿಗೆ ಕೊರೊನಾ ಪಾಸಿಟಿವ್ ದೃಢವಾದ ಹಿನ್ನೆಲೆ ಸೋಂಕಿತನ ರೂಟ್ ಮ್ಯಾಪ್ ಪತ್ತೆಗಾಗಿ ನಗರದ ಶ್ರೀಚಾಮರಾಜೇಂದ್ರ ಮೃಗಾಲಯದ ಸಮೀಪದ ಕೆಫೆ ಮೈಸೂರು ಹೋಟೆಲ್‌ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿನ ಇಟ್ಟಿಗೆ ಗೂಡಿಗೆ ಸಂಬಂಧಿಕರ ಮನೆಗೆ ಬಂದಿದ್ದ ತಮಿಳುನಾಡು ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈತ ಭೇಟಿ ನೀಡಿದ ಹೋಟೆಲ್‌ಗೆ ಸಿಸಿಟಿವಿ ಪರಿಶೀಲಿಸಿ ಸಂಬಂಧಿಸಿದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ.