ಕೊರೊನಾ ತಡೆಗಟ್ಟುವಲ್ಲಿ ಅವಿರತ ಶ್ರಮ: ಪೊಲೀಸರಿಗೆ ಜಪಾನಂದ ಸ್ವಾಮಿ ಸನ್ಮಾನ - Pavagada Shree Ramakrishna Sevashrama
🎬 Watch Now: Feature Video

ಪಾವಗಡ/ತುಮಕೂರು: ಕೊರೊನಾ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ವತಿಯಿಂದ ರಾಮಕೃಷ್ಣ ಸೇವಾಶ್ರಮದಲ್ಲಿ ಜಪಾನಂದಾ ಸ್ವಾಮಿ ಸನ್ಮಾನಿಸಿದರು. ಗಡಿ ಭಾಗದ ತಪಾಸಣೆ ಕೇಂದ್ರಗಳಲ್ಲಿ ಕರ್ತವ್ಯ, ಗಸ್ತು ತಿರುಗುವುದು, ವಾಹನಗಳ ತಪಾಸಣೆ ಮತ್ತು ನಿಯಂತ್ರಣ ಮಾಡುವಲ್ಲಿ ಇಲಾಖೆ ಯಶಸ್ವಿಯಾಗಿದೆ. ಹೀಗಾಗಿ, ಪಾವಗಡದಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾಗಿದೆ. ಸಿಪಿಐ ನಾಗರಾಜು ಹಾಗೂ ಪಿಎಸೈ ನಾಗರಾಜು ಅವರನ್ನು ಈ ವೇಳೆ ಹೂಮಳೆಗರೆದು ಸನ್ಮಾನಿಸಲಾಯಿತು.