ಕೊರೊನಾ ತೊಲಗಲೆಂದು ಮಳವಳ್ಳಿಯಲ್ಲಿ ಹೋಮ! - Malavalli in Mandya district
🎬 Watch Now: Feature Video
ಮಂಡ್ಯ: ಕೊರೊನಾ ನಿರ್ಮೂಲನೆಗಾಗಿ ಮಳವಳ್ಳಿ ನಾಗರಿಕರು ದೇವರ ಮೊರೆ ಹೋಗಿದ್ದು, ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಹೋಮ ಹವನ ನಡೆಸಿದ್ದಾರೆ. ಬೆಳಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಮೃಂತ್ಯುಜಯ ಹಾಗೂ ಗಣಪತಿ ಹೋಮ ನಡೆಸಿ ಜಗತ್ತಿನಲ್ಲಿ ಶಾಂತಿ ನೆಲೆಸಿ ರೋಗ ಮುಕ್ತವಾಗಲೆಂದು ಪ್ರಾರ್ಥನೆ ಸಲ್ಲಿಸಿದರು. ಮಳವಳ್ಳಿಯಲ್ಲಿ ತಬ್ಲಿಘಿ ಪ್ರಕರಣ ಸೇರಿದಂತೆ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದರಿಂದ ಕೆಲ ಬಡಾವಣೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಸದ್ಯ ಮಳವಳ್ಳಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಹೋಮ ಮಾಡಲಾಗಿದೆ.