ವಿಜಯಪುರದಲ್ಲಿ ಕಾಮದಹನ... ಹೋಳಿ ಹುಣ್ಣಿಮೆ ಬರಮಾಡಿಕೊಂಡ ಜನತೆ - Holi celebration in Vijayapura
🎬 Watch Now: Feature Video
ವಿಜಯಪುರ ನಗರದ ವಿವಿಧ ಗಲ್ಲಿಗಳಲ್ಲಿ ಕಾಮನ ದಹನ ಮಾಡುವುದರ ಮೂಲಕ ನಗರ ಜನತೆ ಹೋಳಿ ಹಬ್ಬ ಬರಮಾಡಿಕೊಂಡರು. ನಗರದ ಸಿದ್ದೇಶ್ವರ ಮಂದಿರ, ಹರಣಶಿಕಾರಿ ಗಲ್ಲಿ, ನವಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಮನಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಕಾಮನ ದಹನ ಮಾಡಿದರು. ಇನ್ನು ಯುವ ಸಮೂಹ ತಮಟೆ ಬಾರಿಸುತ್ತಾ ಕುಣಿದು ಕುಪ್ಪಳಿಸುತ್ತಾ ಕಾಮ ದಹದನದಲ್ಲಿ ಭಾಗಿಯಾಗಿದ್ದಾರೆ. ನಾಳೆಯ ಬೆಳಗ್ಗೆಯಿಂದ ರಂಗಿನ ಬಣ್ಣ ಆಡಲು ಯುವಕರು ಹುರುಪಿನಿಂದ ಸಜ್ಜಾಗಿದ್ದಾರೆ. ತಡ ರಾತ್ರಿಯವರಿಗೂ ಕಾಮನ ದಹನ ವಿಜಯಪುರ ನಗರದ ಹಲವು ಭಾಗಗಳಲ್ಲಿ ಮಾಡಲಾಗುತ್ತಿದೆ.