ಕೊಪ್ಪಳ: ಕೊರೊನಾ ಭೀತಿಯ ನಡುವೆಯೂ ಸಂಭ್ರಮದ ಹೋಳಿ ಆಚರಣೆ
🎬 Watch Now: Feature Video
ಕೊಪ್ಪಳ: ಕೊರೊನಾ ವೈರಸ್ ಭೀತಿಯ ನಡುವೆಯೂ ಕೊಪ್ಪಳದಲ್ಲಿ ಸಂಭ್ರಮದಿಂದ ಬಣ್ಣದ ಹಬ್ಬ ಹೋಳಿ ಆಚರಿಸಲಾಯಿತು. ಶನಿವಾರ ರಾತ್ರಿಯೇ ಜಿಲ್ಲೆಯ ಕೆಲವೊಂದು ಪ್ರದೇಶಗಳಲ್ಲಿ ಕಾಮದಹನ ಮಾಡಿದ್ದು, ಇಂದು ಯವಕರು ಮತ್ತು ಮಕ್ಕಳು ಹಲಗೆ, ತಾಳ ಮೇಳದೊಂದಿಗೆ ಹೋಳಿಯಾಡುತ್ತಿದ್ದಾರೆ. ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ 10ಕ್ಕಿಂತ ಹೆಚ್ಚು ಮಂದಿ ಸೇರಬಾರದು ಎಂದು ಜಿಲ್ಲಾಡಳಿತ ಆದೇಶಿಸಿರುವುದರಿಂದ ಜನ ಗುಂಪುಗೂಡದಂತೆ ಪೊಲೀಸರು ಸೂಚಿಸುತ್ತಿರುವುದು ನಗರದಲ್ಲಿ ಕಂಡುಬಂತು.