ಬಿಜೆಪಿಯಿಂದ ಸಂವಿಧಾನಾತ್ಮಕ ಮೌಲ್ಯ ಧಿಕ್ಕರಿಸಿ ರಾಜ್ಯಭಾರ: ಎಚ್.ಕೆ.ಪಾಟೀಲ್ - HK against BJP Patil's outrage
🎬 Watch Now: Feature Video
ಕಾರವಾರ: ಜನರ ಮನಸ್ಸಿಗೆ ಘಾಸಿಯಾಗುವಂತಹ ಆಡಳಿತ ನಡೆಸಿರುವ ಬಿಜೆಪಿ ಸಂವಿಧಾನಾತ್ಮಕ ಮೌಲ್ಯಗಳನ್ನು ಧಿಕ್ಕರಿಸಿ ರಾಜ್ಯಭಾರ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಕಾರವಾರದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ. ಕುಬೇರಪ್ಪ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಜನರ ಮನಸ್ಸಿಗೆ ಘಾಸಿ ಉಂಟುಮಾಡಿದೆ. ಪ್ರಜ್ಞಾವಂತ ಮತದಾರರು ದೇಶದಲ್ಲಾಗುವಂತಹ ಬದಲಾವಣೆಗಳನ್ನು ಪರಿಗಣಿಸಿ ಈ ಬಾರಿಯ ಚುನಾವಣೆಯಲ್ಲಿ ಆರ್.ಎಂ ಕುಬೇರಪ್ಪ ಅವರನ್ನು ಆಯ್ಕೆ ಮಾಡಬೇಕು ಎಂದರು.