ಬೆಳಗಾವಿಯಲ್ಲಿ ರಭಸದ ಮಳೆ: ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಎದುರಾಯ್ತು ಅಪಾಯ..! - ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅಪಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4089506-thumbnail-3x2-sanju.jpg)
ಬಳ್ಳಾರಿ ನಾಲಾದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅಪಾಯದ ಸ್ಥಿತಿ ಎದುರಾಗಿದೆ. ವಿಮಾನ ನಿಲ್ದಾಣದ ಕಂಪೌಂಡ್ ಕೆಳಗೆ ಮತ್ತು ಅದರ ಪಕ್ಕದಲ್ಲಿ ಭಾರಿ ಪ್ರಮಾಣದಲ್ಲಿ ಭೂಮಿ ಕೊಚ್ಚಿಕೊಂಡು ಹೋಗುತ್ತಿದೆ. ನಿಲ್ದಾಣದ ಒಳಗಡೆ ನೀರು ನುಗ್ಗಿ ಭೂಮಿ ಕುಸಿಯುತ್ತಿದೆ. ಮತ್ತೊಂದೆಡೆ ನಗರದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಹೀಗಾಗಿ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾಂಬ್ರಾ, ಬಸವನಕುಡಚಿ, ನಿಲಜಿ, ಮಾರಿಹಾಳ, ಪಂಥಬಾಳೇಕುಂದ್ರಿ, ಮೊದಲಾದ ಗ್ರಾಮಗಳು ಪ್ರವಾಹದ ಭೀತಿಗೆ ಸಿಲುಕಿವೆ.
Last Updated : Aug 9, 2019, 8:13 PM IST