ಹಾವೇರಿ ಜಿಲ್ಲೆಯಲ್ಲೂ ನಿರಂತರ ಮಳೆ: ಸೇತುವೆಗಳು ಜಲಾವೃತ - Haveri Heavy rains experienced throughout News
🎬 Watch Now: Feature Video

ಹಾವೇರಿ ಜಿಲ್ಲಾದ್ಯಂತ ಎರಡು ದಿನಗಳಿಂದ ಮಳೆರಾಯ ಆರ್ಭಟಿಸುತ್ತಿದ್ದಾನೆ. ಸುರಿಯುತ್ತಿರೋ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವರದಾ, ತುಂಗಭದ್ರಾ, ಧರ್ಮಾ ನದಿಗಳ ಜಲಾನಯನ ಪ್ರದೇಶದಲ್ಲಿ ಸಹ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ತಾಲೂಕಿನ ನಾಗನೂರು ಮತ್ತು ಸವಣೂರು ತಾಲೂಕಿನ ಕಳಸೂರು ಬ್ರಿಡ್ಜ್ ಗಳು ಜಲಾವೃತಗೊಂಡಿವೆ. ಬ್ರಿಡ್ಜ್ಗಳ ಮೇಲೆ ತುಂಬಿ ಹರಿತಿರೋ ನೀರಿನಿಂದಾಗಿ ನಾಗನೂರು - ಕೂಡಲ, ಕಳಸೂರು-ದೇವಗಿರಿ ಸಂಪರ್ಕ ಕಡಿತಗೊಂಡಿದೆ. ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.