ಎರಡು ದಿನದ ವಿರಾಮದ ಬಳಿಕ ಮಂಗಳೂರಿನಲ್ಲಿ ಮತ್ತೆ ಬಿರುಸಿನ ಮಳೆ - Mangalore rain
🎬 Watch Now: Feature Video

ಮಂಗಳೂರು: ನಗರದಲ್ಲಿ ಎರಡು ದಿನದ ವಿರಾಮದ ಬಳಿಕ ಇಂದು ಬಿರುಸಿನ ಮಳೆಯಾಗುತ್ತಿದೆ. ಕಳೆದ ಐದು ದಿನಗಳಿಂದ ಜಿಲ್ಲಾದ್ಯಂತ ಭಾರಿ ಮಳೆ ಸುರಿಯುತ್ತಿದ್ದರೂ ಮಂಗಳೂರಿನಲ್ಲಿ ಎರಡು ದಿನ ಮಳೆ ಬಂದಿರಲಿಲ್ಲ. ದಿನದಲ್ಲಿ ಅಲ್ಲಲ್ಲಿ ಕೆಲಹೊತ್ತುಗಳ ಕಾಲ ಮಳೆ ಬಂದಿತ್ತು. ಆದರೆ ಇಂದು ಮುಂಜಾನೆಯಿಂದ ನಗರದಾದ್ಯಂತ ಬಿರುಸಿನ ಮಳೆಯಾಗಿದೆ. ಹವಾಮಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು. ಆದರೆ, ಎರಡು ದಿನಗಳ ಹಿಂದೆ ಸುರಿಯುತ್ತಿದ್ದ ಬಿರುಸಿನ ಮಳೆ ಎರಡು ದಿನಗಳಿಂದ ನಾಪತ್ತೆಯಾಗಿತ್ತು. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿದಿದ್ದು, ಹಲವೆಡೆ ನೆರೆಗಳು ಕಾಣಿಸಿಕೊಂಡಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಸಂಚಾರಕ್ಕೆ ಗುಡ್ಡ ಕುಸಿತಗಳು ಅಡ್ಡಿಯಾದರೆ, ಪಶ್ಚಿಮ ಘಟ್ಟದ ಬಿರುಸಿನ ಮಳೆಗೆ ನೇತ್ರಾವತಿ, ಕುಮಾರಧಾರ ನದಿಗಳು ತುಂಬಿ ಹರಿಯುತ್ತಿವೆ.