ಕೊಪ್ಪಳ ಜಿಲ್ಲೆಯಾದ್ಯಂತ ವ್ಯಾಪಕ ಮಳೆ.. ರೈತರ ಮೊಗದಲ್ಲಿ ಮಂದಹಾಸ!! - Koppal News
🎬 Watch Now: Feature Video
ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಉತ್ತಮ ಮಳೆ ಸುರಿದಿದೆ. ಕೊಪ್ಪಳ, ಭಾಗ್ಯನಗರ, ಚಿಲವಾಡಗಿ, ಯತ್ನಟ್ಟಿ, ದದೇಗಲ್, ಓಜನಹಳ್ಳಿ ಸೇರಿ ಜಿಲ್ಲೆಯ ಅನೇಕ ಕಡೆ ಉತ್ತಮ ಮಳೆಯಾಗಿದೆ. ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮ ಹಾಗೂ ಸುತ್ತಮುತ್ತ ಸಹ ವ್ಯಾಪಕ ಮಳೆ ಬಿದ್ದಿದೆ. ಸುಮಾರು ಒಂದು ಗಂಟೆ ಕಾಲ ಗುನ್ನಾಳ ಭಾಗದಲ್ಲಿ ವ್ಯಾಪಕ ಮಳೆ ಸುರಿದಿದೆ. ಮುಂಗಾರು ಹಂಗಾಮಿನ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.