ಕೊರೊನಾ ನಡುವೆ ಮಳೆಯ ಆರ್ಭಟ... ಕೊಡಗಿನ ಜನತೆಗೆ ಮತ್ತೊಂದು ಆತಂಕ! - ಕೊಡಗು ಜಿಲ್ಲೆ
🎬 Watch Now: Feature Video

ಕೊಡಗು ಜಿಲ್ಲೆಯಲ್ಲಿ ಬುಧವಾರದಿಂದ ಉತ್ತಮವಾದ ಮಳೆಯಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಒಂದೆಡೆ ಕೊರೊನಾ ಭೀತಿ ಹಾಗೂ ಮತ್ತೊಂದೆಡೆ ಮಳೆ ಸ್ಥಳೀಯರಲ್ಲಿ ಸಹಜವಾಗಿ ಭೀತಿಯನ್ನು ಮೂಡಿಸಿದೆ. ಇಂದು ಮಧ್ಯಾಹ್ನದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಚಿಕ್ಕದಾಗಿ ಭೂ ಕುಸಿತಗಳು ಸಂಭವಿಸಿವೆ. ಮಳೆಗಾಲದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಅಗತ್ಯವಾದ ಸಿದ್ಧತೆಗಳನ್ನು ಕೈಗೊಂಡಿದೆ. ಈಗಾಗಲೇ ಎನ್‌ಡಿಆರ್‌ಎಫ್ ತಂಡ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದೆ. ಜಿಲ್ಲೆಯ ಸ್ಥಿತಿಗತಿ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ...