ಮೈದುಂಬಿ ಹರಿಯುತ್ತಿರುವ ವರದಾ ನದಿ.. ಕುಣಿಮೆಳ್ಳಳ್ಳಿ ಗ್ರಾಮಸ್ಥರಲ್ಲಿ ಆತಂಕ - varad river
🎬 Watch Now: Feature Video
ಹಾವೇರಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ವರದಾ ನದಿ ಮೈದುಂಬಿ ಹರಿಯುತ್ತಿದೆ. ಹಲವು ಸೇತುವೆಗಳು ಜಲಾವೃತಗೊಂಡಿವೆ. ಮಳೆಗಾಲ ಬಂದರೆ ಸಾಕು ಸವಣೂರು ತಾಲೂಕಿನ ಕುಣಿಮೆಳ್ಳಳ್ಳಿ ಗ್ರಾಮಸ್ಥರು ಆತಂಕಕ್ಕೀಡಾಗುತ್ತಾರೆ. ಅದಕ್ಕೆ ಕಾರಣ ವರದಾ ನದಿಗೆ ಬ್ರಿಟಿಷರ ಕಾಲದಲ್ಲಿ ಕಟ್ಟಿಸಿದ ಸೇತುವೆ. ಈ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಯಾವಾಗ ಏನಾಗುತ್ತೋ ಎಂಬ ಭೀತಿ ಆವರಿಸಿದೆ.