15 ವರ್ಷಗಳ ನಂತ್ರ ತುಂಬಿದ ಹಳ್ಳ ಕೊಳ್ಳಗಳು... ವರುಣಾಗಮನಕ್ಕೆ ಪಾವಗಡ ಜನ ಖುಷ್ - ತುಮಕೂರು ಮಳೆ ಸುದ್ದಿ
🎬 Watch Now: Feature Video
ತಮಕೂರು: ನಂಜುಂಡಪ್ಪ ವರದಿಯ ಪ್ರಕಾರ 136 ಬರಪೀಡಿತ ಪ್ರದೇಶಗಳಲ್ಲಿ ಮುಂಚೂಣಿ ಸ್ಥಾನ ಪಡೆದಿರುವ ಪಾವಗಡ ತಾಲೂಕು ಸತತ 15 ವರ್ಷಗಳಿಂದ ಮಳೆಬೆಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದು ಕೃಷಿ ಚಟುವಟಿಕೆ ಸ್ಥಗಿತವಾಗಿದ್ದವು. ಹಲವಾರು ಜನರು ವಲಸೆ ಹೋಗಿದ್ದರು. ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಹಲವು ಕೆರೆ, ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಇದರಿಂದ ಈ ಭಾಗದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.