ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ: ರಾಷ್ಟ್ರೀಯ ಹೆದ್ದಾರಿ 119ರಲ್ಲಿ ಸಂಚಾರ ಬಂದ್ - ಚಿಕ್ಕಮಗಳೂರಿನಲ್ಲಿ ಭಾರೀ ಮಳೆ
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಭಾರಿ ಮಳೆಯಿಂದ ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಬಳಿ ರಸ್ತೆ ಪಕ್ಕದಲ್ಲಿ ಇರುವಂತಹ ಮಣ್ಣು ಕೊಚ್ಚಿ ಹೋಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 119 ರಲ್ಲಿ ರಸ್ತೆ ಸಂಚಾರ ಬಂದ್ ಆಗಿದ್ದು, ಶೃಂಗೇರಿ - ಕುದುರೆಮುಖ - ಮಂಗಳೂರು ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಮೂಡಿಗೆರೆ ತಾಲೂಕಿನ ಅಬ್ಬ ಗೂಡಿಗೆಯ ಕಿರು ಸೇತುವೆಯು ಕೊಚ್ಚಿ ಹೋಗಿದ್ದು, ಅಬ್ಬ ಗೂಡಿಗೆ - ಕಲಗೋಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ.