ಚಿಕ್ಕಮಗಳೂರಲ್ಲಿ ಮತ್ತೆ ವರುಣಾರ್ಭಟ : ಆಂತಕದಲ್ಲಿ ಮಲೆನಾಡಿಗರು - chikkamagalore district news
🎬 Watch Now: Feature Video
ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಬಿಡುವು ನೀಡಿದ್ದ ವರುಣ ಇಂದು ಮತ್ತೆ ಸುರಿಯಲು ಪ್ರಾರಂಭಿಸಿದ್ದಾನೆ. ಮಲೆನಾಡು ಭಾಗ ಹಾಗೂ ನಗರ ಪ್ರದೇಶದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ಮತ್ತೆ ಮಲೆನಾಡಿಗರು ಬೆಚ್ಚಿ ಬೀಳುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಮಹಾ ಮಳೆ ಜನರ ಬದುಕನ್ನೇ ಸರ್ವ ನಾಶ ಮಾಡಿ ಹೋಗಿತ್ತು, ಸದ್ಯ ಮಳೆ ಎಂದರೇ ಸಾಕು ಮಲೆನಾಡಿನ ಜನರು ಭಯ ಪಡುವಂತಾಗಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಭಾಗದಲ್ಲಿಯೂ ಮಳೆ ಮುಂದುವರೆದಿದೆ. ನಿರಂತರ ಮಳೆಗೆ ಜನ ಜೀವನ ಹಾಗೂ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ.