ಮಲೆನಾಡಲ್ಲಿ ಮಳೆ ಕಾಟ; ಒಣ ಹಾಕಿದ ಕಾಫಿ ನೀರು ಪಾಲು - ಒಣ ಹಾಕಿದ ಕಾಫಿ ನೀರು ಪಾಲು
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ನಿರಂತರ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಕಳಸ ಸುತ್ತಮುತ್ತ ಭಾರಿ ಮಳೆ ಆಗುತ್ತಿದ್ದು, ತುಮಕೂರು ಜಿಲ್ಲೆಯ ಮಾಳಿಗನಾಡಿನಲ್ಲಿ ಒಣ ಹಾಕಿದ ಕಾಫಿ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ. ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೀರೇಶಗೌಡ ಎಂಬುವರಿಗೆ ಸೇರಿದ 15 ಕ್ಕೂ ಹೆಚ್ಚು ಕಾಫಿ ಚೀಲ ನೀರು ಪಾಲು ಆಗಿದೆ. ಧಾರಾಕಾರ ಮಳೆಯಿಂದ ಕಾಫಿ, ಮೆಣಸು, ಭತ್ತದ ಬೆಳೆಗಳು ನಾಶವಾಗಿದ್ದು, ಹೊತ್ತಲ್ಲದ ಹೊತ್ತಲ್ಲಿ ಸುರಿಯುತ್ತಿರುವ ಮಳೆಗೆ ಮಲೆನಾಡಿಗರು ಹಾಗೂ ರೈತರು ಕಂಗಾಲಾಗಿದ್ದಾರೆ.