ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಶೇಂಗಾ ಬೆಳೆ ಸ್ವತಃ ಹಾಳು ಮಾಡಿದ ರೈತ - ಹಾವೇರಿ ಇತ್ತೀಚಿನ ಸುದ್ದಿ
🎬 Watch Now: Feature Video
ಹಾವೇರಿ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ರೈತರು ನಲುಗಿದ್ದಾರೆ. ಅದರಲ್ಲೂ ಶೇಂಗಾ ಬೆಳೆದ ರೈತರ ಪಾಡು ಹೇಳತೀರದು. ಮಳೆ ಬಿಡುವು ನೀಡದ ಕಾರಣ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈತನೊಬ್ಬ 6 ಎಕರೆ ಶೇಂಗಾ ಬೆಳೆಯನ್ನು ಹಾಳು ಮಾಡಿದ್ದಾನೆ. ಶೇಂಗಾ ಫಸಲು ಚೆನ್ನಾಗಿ ಬೆಳೆದಿತ್ತು. ಶೇಂಗಾ ಕಿತ್ತು ಜಮೀನಿನಲ್ಲಿ ಹಾಕಿದ್ದೆವು. ಇನ್ನೇನು ಶೇಂಗಾ ಕೈಗೆ ಬಂತು ಎನ್ನುವಷ್ಟರಲ್ಲಿ ವರುಣ ಆರ್ಭಟಿಸಿದ. ಇದರಿಂದ ಜಮೀನಿನಲ್ಲಿ ಶೇಂಗಾ ಕೊಳೆಯಲಾರಂಭಿಸಿತು. ಬಂದ ಫಸಲು ಮಳೆರಾಯನ ಆರ್ಭಟಕ್ಕೆ ಬಲಿಯಾಯಿತು. ಎರಡು ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿದ ಶೇಂಗಾಕ್ಕೆ ಸಂಸ್ಕರಣೆ ಮಾಡಿದರೂ ಯಂತ್ರದ ಬಾಡಿಗೆ ಸಿಗುತ್ತಿರಲಿಲ್ಲ ಹೀಗಾಗಿ ಬೇಸತ್ತು ಶೇಂಗಾ ಮಣ್ಣುಪಾಲು ಮಾಡಿದ್ದೇನೆ ಎಂದು ರೈತ ಬೇಸರ ವ್ಯಕ್ತಪಡಿಸಿದ್ದಾನೆ.