ಜನತಾ ಕರ್ಫ್ಯೂ ಬೆಂಬಲಿಸುವಂತೆ ಆರೋಗ್ಯ ಸಚಿವ ಶ್ರೀರಾಮುಲು ಮನವಿ - Sriramulu appeals to support Janata curfew
🎬 Watch Now: Feature Video
ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಸದ್ಯ ಕರ್ನಾಟಕವನ್ನು ಚಿಂತೆಗೀಡುಮಾಡಿದೆ. ಹಾಗಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ, ಮಾರ್ಚ್ 22 ರಂದು ಜನರೇ ಒಂದು ಹೆಜ್ಜೆ ಮುಂದೆ ಬಂದು ಜನತಾ ಕರ್ಫ್ಯೂ ಜಾರಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಈಗ ರಾಜ್ಯದಲ್ಲೂ ಜನತಾ ಕರ್ಫ್ಯೂ ಬೆಂಬಲಿಸುವಂತೆ ಆರೋಗ್ಯ ಇಲಾಖೆಯ ಸಚಿವ ಶ್ರೀ ರಾಮುಲು ಮನವಿ ಮಾಡಿದ್ದಾರೆ. ಕೋವಿಡ್-19 ಎಲ್ಲೆಡೆ ಆವರಿಸಿಕೊಳ್ಳುತ್ತಿದ್ದು, ಇದನ್ನ ನಿರ್ಮೂಲನೆ ಮಾಡಲು ಜನರೇ ಮುಂದೆ ಬರಬೇಕು, ಜನರಿಂದ ಜನರಿಗಾಗಿ ಜನತಾ ಕರ್ಫ್ಯೂ ಜಾರಿಗೊಳ್ಳಿಸಬೇಕು, ಕೊರೊನಾ ವೈರಸ್ ವಿರುದ್ಧ ಹೋರಾಡಲು ಜನತಾ ಕರ್ಫ್ಯೂ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
Last Updated : Mar 20, 2020, 11:36 AM IST