ಪೊಲೀಸರೆಂದಾಕ್ಷಣ ನೆನಪಿಗೆ ಬರೋದು ಲಾಠಿಚಾರ್ಜ್ ಮಾತ್ರನಾ? ಮಾನವೀಯತೆಯ ಈ ವಿಡಿಯೋ ನೋಡಿ - ಹಾವೇರಿ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಹಾವೇರಿ: ಲಾಕ್ಡೌನ್ ವೇಳೆ ಪೊಲೀಸರ ಪಾತ್ರ, ಅವರ ಸೇವೆ ಅವಿಸ್ಮರಣೀಯ. ಪೊಲೀಸರೆಂದಾಕ್ಷಣ ಮೊದಲು ನೆನಪಿಗೆ ಬರುವುದು ಲಾಠಿ ಚಾರ್ಜ್, ದಂಡ ವಸೂಲಿ, ಶಿಕ್ಷೆ ಇವೇ. ಆದ್ರೆ ಅವರಿಗೂ ಮಾನವೀಯತೆ ಇದೆ ಎಂಬುದನ್ನೇ ಮರೆತು ಬಿಡುತ್ತೇವೆ. ನಗರದ ಪೊಲೀಸರು ಇವೆಲ್ಲವನ್ನು ಸುಳ್ಳಾಗಿಸಿದ್ದಾರೆ. ಮೂರು ಜನ ಪೇದೆಗಳು ಮೂಕ ಪ್ರಾಣಿಗಳ ಮತ್ತು ನಿರ್ಗತಿಕರ ನೆರವಿಗೆ ನಿಂತಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯ ಪೇದೆ ಮುತ್ತಣ್ಣ ಚಿಂದಿ ಮತ್ತು ಅವರ ಸ್ನೇಹಿತರು ನಿರ್ಗತಿಕರಿಗೆ ಸಹಾಯ ಹಸ್ತ ಚಾಚಿದ್ದಾರೆ.