ಜಿ.ಟಿ.ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ: ಹರೀಶ್ ಗೌಡ ತಿರುಗೇಟು
🎬 Watch Now: Feature Video
ಮೈಸೂರು: ಜಿ.ಟಿ.ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಸಾಕಷ್ಟು ಷಡ್ಯಂತರ ನಡೆದಿದೆ. ಆದರೆ, ಅವರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಜಿಟಿಡಿ ಪುತ್ರ ಹರೀಶ್ ಗೌಡ ಹೇಳಿದ್ದಾರೆ. ನಂಜನಗೂಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಕಷ್ಟು ಮಂದಿ ವಿರೋಧ ಮಾಡಿದ್ದಾರೆ. ಆದರೂ ಜನರು ಜಿಟಿಡಿ ಅವರನ್ನು ಕೈಬಿಟ್ಟಿಲ್ಲ. ಅವರನ್ನು ರಾಜಕೀಯವಾಗಿ ಮುಗಿಸಲು ಜನರಿಂದ ಮಾತ್ರ ಸಾಧ್ಯ. ಜನರ ಹಾಗೂ ದೈವಬಲ ಇರುವವರೆಗೆ ಅವರನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.