ಪ್ರಧಾನಿ ಮೋದಿ ಚೀನಾಗೆ ತಕ್ಕ ಉತ್ತರ ಕೊಡುತ್ತಾರೆ: ಶಾಸಕ ಸಿ.ಎಂ.ಉದಾಸಿ - Hanagal Mla cm Udasi talks about indo china fight
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7750686-thumbnail-3x2-vish.jpg)
ಹಾನಗಲ್: ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆದರೆ ನಮ್ಮ ಸೈನಿಕರು ವೈರಿಗಳ ಹುಟ್ಟಡಗಿಸುವ ಶಕ್ತಿ ಮತ್ತು ಸಾಮರ್ಥ್ಯ ಹೊಂದಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದ್ದಾರೆ. ದೇಶದ ಸೈನಿಕರ ಬೆಂಬಲಕ್ಕೆ ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ದೇಶದ ಗಡಿಯೊಳಗೆ ನುಸುಳುವ ವೈರಿಗಳಿಗೆ ತಕ್ಕ ಉತ್ತರ ಕೊಡಲು ನಮ್ಮ ಸೈನ್ಯ ಸನ್ನದ್ಧವಾಗಿದೆ. ನಮ್ಮ ಪ್ರಧಾನಿ ನಾಯಕತ್ವವನ್ನ ಇಡೀ ವಿಶ್ವ ಮೆಚ್ಚಿದೆ. ಇಂತಹ ಪ್ರಧಾನಿ ನಮಗೆ ದೊರಕಿರುವುದು ನಮ್ಮ ಪುಣ್ಯ. ನಮ್ಮ ದೇಶಕ್ಕೆ ಒಬ್ಬ ಸಮರ್ಥ ನಾಯಕ ಸಿಕ್ಕಿದ್ದಾರೆ. ಚೀನಾ ಕ್ಯಾತೆಗೆ ನಮ್ಮ ಪ್ರಧಾನಿಗಳು ತಕ್ಕ ಪ್ರತ್ಯುತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.