ಎಲ್ಲಾ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಆಗ್ರಹಿಸಿ ಧರಣಿ - ರಾಯಚೂರಿನಲ್ಲಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
🎬 Watch Now: Feature Video
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರನ್ನ ನಿಯೋಜನೆ ಮಾಡುವಂತೆ ಆಗ್ರಹಿಸಿ ರಾಜ್ಯ ಪದವಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯಿಂದ ರಾಯಚೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 2020, ನ. 17ರಂದು 2020-21ನೇ ಸಾಲಿನ ಪದವಿ ತರಗತಿಗಳು ಆರಂಭವಾಗಿದ್ದು, ಕಳೆದ ವರ್ಷದಂತೆ ಎಲ್ಲಾ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಆದ್ರೆ ಆಯುಕ್ತರ ಕಚೇರಿಯಿಂದ 2021, ಜ. 1ರಂದು 7091 ಅತಿಥಿ ಉಪನ್ಯಾಸಕರನ್ನ ನೇಮಿಸಕೊಳ್ಳಬೇಕೆಂದು ಸುತ್ತೋಲೆ ಹೋರಾಡಿಸಲಾಗಿದೆ. ಇದರಿಂದ ಇನ್ನುಳಿದ ಶೇ. 50ರಷ್ಟು ಅಂದರೆ 7091 ಜನ ಅತಿಥಿ ಉಪನ್ಯಾಸಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಕಳೆದ ವರ್ಷದಂತೆ ಎಲ್ಲಾ ಅತಿಥಿ ಉಪನ್ಯಾಸಕರನ್ನ ನೇಮಿಸಿಕೊಳ್ಳಬೇಕು. ಮಾರ್ಚ್ 2021ರವರೆಗೆ ಮಾತ್ರವಲ್ಲದೇ ಯುಜಿಸಿ ಪ್ರಕಾರ ಸದರಿ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಸೇವೆ ಮುಂದುವರೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ರವಾನಿಸಿದ್ರು.