ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಯುವಕರ ಹೊಡೆದಾಟ... ಸಿಸಿಟಿವಿಯಲ್ಲಿ ಮಾರಾಮಾರಿ ದೃಶ್ಯ ಸೆರೆ - hubli news
🎬 Watch Now: Feature Video
ಕ್ಷುಲ್ಲಕ ಕಾರಣಕ್ಕೆ ಹೋಟೆಲ್‌ನಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯ ಮಥುರಾ ಹೋಟೆಲ್‌ನಲ್ಲಿ ನಡೆದಿದೆ. ಒಬ್ಬರನ್ನೊಬ್ಬರು ಗುರಾಯಿಸಿದ್ದ ಕ್ಷುಲ್ಲಕ ಕಾರಣಕ್ಕೆ ಯುವಕರು ಹೊಡೆದಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ರಘು ಎಂಬಾತನನ್ನು ಮಂಜುನಾಥ ಎಂಬುವನು ಥಳಿಸಿರುವ ದೃಶ್ಯ ಸೆರೆಯಾಗಿದೆ. ಏಕಾಏಕಿ ಹೋಟೆಲ್ ಪ್ರವೇಶಿಸಿದ ಮಂಜುನಾಥ ಮನಬಂದಂತೆ ಥಳಿಸಿದ್ದಾನೆ. ಹಣದ ವಿಚಾರದಲ್ಲಿ ಹೊಡೆದಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಕಸಬಾ ಪೇಟೆ ಪೊಲೀಸ್ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Last Updated : Feb 20, 2020, 8:26 PM IST