ಕೋಲಾರದಲ್ಲಿ 'ಕರಗ' ಮಹೋತ್ಸವದ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ - undefined
🎬 Watch Now: Feature Video
ಕೋಲಾರ: ಕೋಲಾರದ ಅಂಬೇಡ್ಕರ್ ನಗರದಲ್ಲಿ ನಡೆದ ಕರಗ ಮಹೋತ್ಸವದ ಅಂಗವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು. ಈ ವೇಳೆ ಜಾನಪದ ಕುಣಿತ, ಗಾರುಡಿ ಬೊಂಬೆಗಳು, ವೀರಗಾಸೆ ಕುಣಿತ ನೋಡುವುದೇ ಕಣ್ಣಿಗೆ ಹಬ್ಬ. ಜೊತೆಗೆ ನಾದಸ್ವರ, ಮಂಗಳವಾದ್ಯ, ತಮಟೆ ವಾದ್ಯಗಳು ಕಿವಿಗೆ ಮುದ ನೀಡುವಂತಿದ್ದವು. ಬಂಗಾರಪೇಟೆ ವೃತ್ತದಿಂದ ಆರಂಭವಾದ ಮೆರವಣಿಗೆ ಎಂಜಿ ರಸ್ತೆ ಮೂಲಕ ಕೋಲಾರಮ್ಮ ದೇವಾಲಯದವರೆಗೂ ಸಾಗಿ ಬಂತು. ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.