ಮದ್ಯದ ಅಮಲಿನಲ್ಲಿ ಗಣೇಶ ಮೂರ್ತಿಯನ್ನೇ ಧ್ವಂಸಗೊಳಿಸಿದ ಕಿಡಿಗೇಡಿಗಳು - ಗ್ರಾಮಸ್ಥರಿಗೆ ಅವಾಜ್
🎬 Watch Now: Feature Video
ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಕುಡಿದ ಮತ್ತಿನಲ್ಲಿ ಯುವಕರಿಬ್ಬರು ಧ್ವಂಸಗೊಳಿಸಿದ್ದಾರೆ. ಹರೀಶ ಮತ್ತು ಸಚಿನ್ ಎಂಬುವರು ಈ ಕೃತ್ಯ ಎಸಗಿರುವ ಆರೋಪಿಗಳು. ಗ್ರಾಮಸ್ಥರು ತಮ್ಮಿಚ್ಛೆಗೆ ವಿರುದ್ಧವಾಗಿ ಗಣೇಶನನ್ನು ಕೂರಿಸಿದ್ದಾರೆ ಎಂಬ ಕಾರಣಕ್ಕೆ ಇವರು ಕೋಪಗೊಂಡಿದ್ದರು ಎನ್ನಲಾಗ್ತಿದೆ. ಆದ್ದರಿಂದ ಸೋಮವಾರ ರಾತ್ರಿ ಕುಡಿದು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಅಲ್ಲದೆ, ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಅವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.