ದೀಪಾಲಂಕಾರದಿಂದ ಅಲಂಕೃತಗೊಂಡ ಗಣಿ ಜಿಲ್ಲೆಯ ಸರ್ಕಾರಿ ಕಚೇರಿಗಳು - ಸರ್ಕಾರಿ ಕಚೇರಿಗಳ
🎬 Watch Now: Feature Video
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗಣಿನಾಡಿನಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳ ಕಟ್ಟಡಗಳನ್ನು ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬಳ್ಳಾರಿ ನಗರದ ಕೇಂದ್ರ ಸ್ಥಾನದಲ್ಲಿರುವ ರೈಲ್ವೆ ನಿಲ್ದಾಣ ಕಟ್ಟಡವು ಕೆಸರಿ, ಬಿಳಿ, ಹಸಿರಿನಿಂದ ದೀಪಾಂಕೃತಗೊಂಡಿದ್ದು, ಈ ಕಟ್ಟಡದ ಮುಂದೆ ಸಾರ್ವಜನಿಕರು ಸೆಲ್ಫಿಗೆ ಮೊರೆ ಹೋದರು. ಇನ್ನು ನಗರದ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಹಶೀಲ್ದಾರರ ಕಚೇರಿ, ಪೊಲೀಸ್ ಇಲಾಖೆಯ ಠಾಣೆಗಳು, ಜಿಲ್ಲಾ ಆಸ್ಪತ್ರೆ, ಅರಣ್ಯ ಇಲಾಖೆ, ಆರ್.ಟಿ.ಒ ಕಚೇರಿಯ ಕಟ್ಟದಗಳು ದೀಪಾಲಂಕೃತಗೊಂಡಿದ್ದು ವಿಶೇಷವಾಗಿತ್ತು.