ಹೊಸಪೇಟೆಯಲ್ಲಿ ಗೌರಿ ಹುಣ್ಣಿಮೆ ಸಂಭ್ರಮ: ಮಹಿಳೆಯರಿಂದ ಗೌರಿಗೆ ವಿಶೇಷ ಪೂಜೆ - ಲೆಟೆಸ್ಟ್ ಹೊಸಪೇಟೆ ಗೌರಿ ಹುಣ್ಣಿಮೆ ನ್ಯೂಸ್
🎬 Watch Now: Feature Video
ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಹೊಸಪೇಟೆ ನಗರದಲ್ಲಿ ಗೌರಿ ಹಬ್ಬವನ್ನು ಮಹಿಳೆಯರು ದೇವರಿಗೆ ಮಂಗಳಾರತಿ ಬೆಳಗುವ ಮೂಲಕ ವಿಶೇಷವಾಗಿ ಆಚರಿಸಿದರು. ತಾಲೂಕಿನ ಪ್ರಮುಖ ದೇವರುಗಳಾದ ನೀಲಕಂಠೇಶ್ವರ, ಸಾಯಿಬಾಬ, ಆಂಜನೇಯನ ದೇವಸ್ಥಾನ, ಬನ್ನಿ ಮಹಂಕಾಳಿ, ರಾಮ ಮಂದಿರ ದೇವಾಲಯದಲ್ಲಿ ಗೌರಿಯ ಮೂರ್ತಿಯನ್ನು ದೇವರ ಗುಡಿಯಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಈ ಹಬ್ಬವು ಮಹಿಳೆಯರ ಅಚ್ಚುಮೆಚ್ಚಿನ ಹಬ್ಬವಾಗಿದ್ದು, ಸಕ್ಕರೆ ಆರತಿಯನ್ನು ದೇವರಿಗೆ ಬೆಳಗಿ ಪೂಜೆಯನ್ನು ಮಾಡುವುದು ಈ ಹುಣ್ಣಿಮೆಯ ವಿಶೇಷವಾಗಿದೆ. ಈ ಗೌರಿ ಹಬ್ಬದಲ್ಲಿ ಪೂಜೆ ಮಾಡುವುದರಿಂದ ಹೆಣ್ಣುಮಕ್ಕಳಿಗೆ ಬಹು ಬೇಗನೆ ವರ ಸಿಗುತ್ತಾನೆಂಬ ನಂಬಿಕೆಯೂ ಸಹ ಭಕ್ತರಲ್ಲಿದೆ.