ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಹಾಸನದ ಜನತೆ: ನಗರದ ಸದ್ಯ ಸ್ಥಿತಿಗತಿ ಬಗ್ಗೆ ವಾಕ್ ತ್ರೂ - ಕೊರೊನಾ ವೈರಸ್ ಲಕ್ಷಣಗಳು
🎬 Watch Now: Feature Video
ಜನತಾ ಕರ್ಪ್ಯೂಗೆ ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸ್ವಯಂಪ್ರೇರಿತವಾಗಿ ವಾಣಿಜ್ಯ, ವ್ಯಾಪಾರ ಮತ್ತು ಇನ್ನಿತರ ಎಲ್ಲಾ ಮಳಿಗೆಗಳು ಬಂದ್ ಆಗಿವೆ. ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹೊಸ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ಎನ್ಆರ್ ವೃತ್ತ, ಎಂ.ಜಿ.ರಸ್ತೆ, ಬಿ.ಎಂ.ರಸ್ತೆ, ರೈಲು ನಿಲ್ದಾಣ ಮುಂತಾದ ಸ್ಥಳಗಳು ಭಣಗುಡುತ್ತಿವೆ. ಕೆಲವು ಅಂಗಡಿ ಮಾಲೀಕರು ಜನತಾ ಕರ್ಫ್ಯೂ ಎಂಬ ನಾಮಫಲಕವನ್ನು ಹಾಕಿ ಅಂಗಡಿಗಳನ್ನು ಮುಚ್ಚಿದ್ದಾರೆ. ಈ ನಡುವೆ ನಗರದಲ್ಲಿ 5 ಮದುವೆಗಳು ಬಹಳ ಸರಳ ರೀತಿಯಲ್ಲಿ ನೆರವೇರಿದ್ದು ವಿಶೇಷವಾಗಿತ್ತು. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ತ್ರೂ ಇಲ್ಲಿದೆ...
Last Updated : Mar 22, 2020, 1:09 PM IST