ದೀಪಾವಳಿ ಸಂಭ್ರಮ: ಮೈಸೂರಿನಲ್ಲಿ ಹಸಿರು ಪಟಾಕಿಗೆ ಮುಗಿಬಿದ್ದ ಜನ, ಭರ್ಜರಿ ವ್ಯಾಪಾರ - mysore diwali news
🎬 Watch Now: Feature Video

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹಸಿರು ಪಟಾಕಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ವ್ಯಾಪಾರ ಆಗುತ್ತೋ, ಇಲ್ಲವೋ ಎಂದು ಬೇಸರಗೊಂಡಿದ್ದ ಪಟಾಕಿ ವ್ಯಾಪಾರಿಗಳಿಗೆ ನೆಮ್ಮದಿ ತಂದಿದೆ. ವ್ಯಾಪಾರ ವಹಿವಾಟು ಚುರುಕುಗೊಂಡಿದೆ. ಈ ಬಾರಿ ಕೇಂದ್ರದ ಮಾರ್ಗಸೂಚಿಯಂತೆ ಹಸಿರು ಪಟಾಕಿ ಮಾರಾಟ ಮಾಡಲು ಮೈಸೂರಿನ ಜೆ.ಕೆ. ಮೈದಾನದಲ್ಲಿ ಹತ್ತಕ್ಕೂ ಹೆಚ್ಚು ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಹಸಿರು ಪಟಾಕಿ ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದಾರೆ.