ಜನತಾ ಕರ್ಫ್ಯೂಗೆ ಏಲಕ್ಕಿ ನಗರಿ ಹಾವೇರಿಯಲ್ಲಿ ಭಾರಿ ಬೆಂಬಲ.. - haveri for janata curfew

🎬 Watch Now: Feature Video

thumbnail

By

Published : Mar 22, 2020, 5:32 PM IST

ಹಾವೇರಿ : ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಏಲಕ್ಕಿ ನಗರಿ ಹಾವೇರಿಯಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಹಾವೇರಿ ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ಜನಸಂಖ್ಯೆ ವಿರಳವಾಗಿತ್ತು. ನಗರದ ಪ್ರಮುಖ ವೃತ್ತಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಅಂಗಡಿ-ಮುಂಗಟ್ಟುಗಳು ಮುಚ್ಚಿದ ಹಿನ್ನೆಲೆ ಸಂಚಾರ ವಿರಳವಾಗಿತ್ತು. ಅಂಬೇಡ್ಕರ್ ವೃತ್ತ, ಗಾಂಧಿವೃತ್ತ, ಮೈಲಾರ ಮಹದೇವಪ್ಪ, ಹೊಸಮನಿ ಸಿದ್ದಪ್ಪ, ಬಸವೇಶ್ವರ ವೃತ್ತ, ಜೆಹೆಚ್ ಪಟೇಲ್ ವೃತ್ತ, ಹೊಸಮನಿ ಸಿದ್ದಪ್ಪ ಸರ್ಕಲ್‌ ಸೇರಿದಂತೆ ನಗರದ ವಿವಿಧ ವೃತ್ತಗಳಲ್ಲಿ ಜನಸಂಚಾರ ವಿರಳವಾಗಿತ್ತು. ತೀರಾ ಅಗತ್ಯ ಮತ್ತು ತುರ್ತುಸೇವೆ ಸಲ್ಲಿಸುವ ಅರಕ್ಷಕರು, ವೈದ್ಯರು, ವೈದ್ಯಕೀಯ ಸಿಬ್ಬಂದಿ ರಸ್ತೆಯಲ್ಲಿ ಕಂಡು ಬಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.